ಡೈಸಿ ಶಾ (ಜನನ : ೨೫ ಆಗಸ್ಟ್ ೧೯೮೪) ಇವರು ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ನರ್ತಕಿ. ಇವರು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೦ ರ ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ವಂದೇ ಮಾಥರಂನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಪಾದಾರ್ಪಣೆ ಮಾಡಿದರು, ಆದರೆ ೨೦೧೧ ರ ಕನ್ನಡ ಚಲನಚಿತ್ರ ಬಾಡಿಗಾರ್ಡ್ ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು .ನಂತರ ಅವರು ೨೦೧೪ ರ ಬಾಲಿವುಡ್ ಚಲನಚಿತ್ರ ಜೈ ಹೋ ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಕಾಣಿಸಿಕೊಂಡರು. ೨೦೧೫ ರಲ್ಲಿ, ಅವರು ಹೇಟ್ ಸ್ಟೋರಿ ೩ ರ ಭಾಗವಾಗಿದ್ದರು. == ವೃತ್ತಿಜೀವನ == ಷಾ ಇವರು ಗುಜರಾತಿ ಕುಟುಂಬಕ್ಕೆ ಸೇರಿದವರು, ಆದರೆ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು. ಇವರು ಜಮೀನ್ ಮತ್ತು ಖಾಕೀ ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಮಾಡೆಲಿಂಗ್ ಪ್ರಾರಂಭಿಸಿದರು, ಫೋಟೋ ಶೂಟ್ ಮತ್ತು ಮುದ್ರಣ ಜಾಹೀರಾತುಗಳನ್ನೂ ಸಹ ಮಾಡಿದರು. == ಫಿಲ್ಮೋಗ್ರಾಫಿ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==